Sunday, February 12, 2012

ಸುಡುಗಾಡಲ್ಲಿ ಮುಖವಾಡದ ಬದುಕು ...

ತನ್ನದಲ್ಲದ ನಾಡಿನಲ್ಲಿ ತನ್ನ ಗುಣಗಳ ಮರೆತು ಮೌನವೆಂಬ ಮುಖವಾಡ ತೊಟ್ಟು ಬದುಕುವ ಹುಡುಗಿಯ ಮನದಾಳದ ಮಾತನ್ನು ಓದಿ ನೋಡಿ

 

ನಾನೀಗ ಬದುಕುತಿಹೆನು ಮುಖವಾಡ ಧರಿಸಿ
ಸುಡುಗಾಡಲ್ಲಿ ಬದುಕುತಿಹೆನು ಮುಖವಾಡ ಧರಿಸಿ
ನಾನು ನಾನಾಗಿಲ್ಲ ನನ್ನ ತನವಿಲ್ಲ
ನಾನಂತು ಮೊದಲಂತೆ ಇಲ್ಲವೇ ಇಲ್ಲ
ಆದರೂ ಬದುಕುತಿಹೆನಿಲ್ಲಿ ಮುಖವಾಡ ಧರಿಸಿ

ಎತ್ತ ನೋಡಿದರತ್ತ ರಾಕ್ಷರ ದಂಡು
ಬರುತಿಹರು ತುಳಿಯಲೆನ್ನ ಹಿಂಡು ಹಿಂಡು
ಬೈಯುವರು ಎನ್ನ ಕಟುನುಡಿಗಳಿಂದ
ಹೀಯಾಳಿಸುವರು ಕೊಂಕು ಮಾತಿನಿಂದ
ಆದರೂ ಬದುಕುತಿಹೆನಿಲ್ಲಿ ಮುಖವಾಡ ಧರಿಸಿ

ಮನಸೊಂದು ಗೊಂದಲದ ಗೂಡಾಗಿದೆ
ಎದೆಯಲ್ಲಿ ಸಾವಿರ ಗಾಯಗಳಾಗಿದೆ
ಮುಖದಲ್ಲಿ ಕೃತಕ ನಗು ಬಂದಿದೆ
ಜೀವನದ ಮೇಲೆ ಬೇಸರವು ಮೂಡಿದೆ
ಆದರೂ ಬದುಕುತಿಹೆನಿಲ್ಲಿ ಮುಖವಾಡ ಧರಿಸಿ  

                                       ಇಂತಿ
                                                 ಕವಿತಾ ಗೌಡ

3 comments:

  1. Ree neevu thumba strongu. annakondiddanna sadhisiddira...

    ReplyDelete
    Replies
    1. Sir nan prakara innu enu sadisilla. saadisodu tumba ide. saadane ge kone illa alva sir..?

      Delete

Note: Only a member of this blog may post a comment.