Wednesday, April 18, 2012

ಮನವೆಂಬ ಕೊಳ ...


ಮನಸೆಂಬ ಕೊಳದೊಳಗೆ
ಆಸೆಯೆಂಬ ತರತರದ ಮೀನುಗಳು
ಪುಟ್ಟ ಮೀನು ದೊಡ್ಡ ಮೀನು
ಹೊಳೆವ ನಕ್ಷತ್ರದಂತ ಮೀನು

ಆಸೆಯೆಂಬ ಮೀನ ತಿನ್ನುವ
ನಿರಾಸೆಯೆಂಬ ತಿಮಿಂಗಿಲ
ಹೋಗುವಾಗ ಬರುವಾಗ ಸಿಕ್ಕಿಸಿಕೊಳ್ಳುವ
ಸಮಯವೆಂಬ ಜಾರುವ ಪಾಚಿ

ಕೊಳದೊಳಗೆ ಈಜುವಾಗ ಬೇಕು
ಬಲಶಾಲಿ ರೆಕ್ಕೆಗಳು ಸ್ವಲ್ಪ ಚುರುಕಾದ ಬುದ್ದಿ
ತಿಮಿಂಗಿಲದ ಬೇಟೆಯಿಂದ ತಪ್ಪಿಸಿಕೊಳ್ಳಲು
ಪಾಚಿಯಲ್ಲಿ ಸಿಕ್ಕಾಗ ಹೊರಬರಲು


       ಇಂತಿ
                 ಕವಿತಾ ಗೌಡ