Thursday, February 2, 2012

ಮೌನವೆಂಬ ಒಡವೆ ...

ಮನಸಿಲ್ಲದೇ ಮೌನವಾದ ಹುಡುಗಿಯ ಮನದ ತಳಮಳವನ್ನು ಓದಿ ನೋಡಿ.



ಖಾಲಿ ಪುಟದ ಬದುಕಿನಲ್ಲಿ
ಏನು ಅರಿಯದ ಮನಕೆ ಇಂದು
ಮೌನವೆಂಬ ಒಡವೆ  ಏಕೆ

ಸುತ್ತ ನಡೆವ ಜಂಜಾಟದಲ್ಲಿ
ಮೂಕವಾದ ಮನಕೆ ಇಂದು
ಮೌನವೆಂಬ ಒಡವೆ ಏಕೆ

ನಾನು ನಾನೆಂದು ಕೂಗುವ ಜನರ ಮದ್ಯದಲ್ಲಿ
ನೀರಸ ಭಾವದಿ ನಿಂತ ಮನಕೆ ಇಂದು
ಮೌನವೆಂಬ ಒಡವೆ ಏಕೆ

ತಾನು ತಾನಾಗಿ ಬದುಕದೆ
ತನ್ನ ತನವ ಮರೆತ ಮನಕೆ ಇಂದು
ಮೌನವೆಂಬ ಒಡವೆ ಏಕೆ 

                                              ಇಂತಿ 
                                                    ಕವಿತಾ ಗೌಡ

9 comments:

  1. uttamaa aramba... pisumaatina gaali mattastu moodi barali...

    ReplyDelete
    Replies
    1. ಧನ್ಯವಾದಗಳು ತರುಣ್ ಅವರೇ ಖಂಡಿತ ಪಿಸುಮಾತಿನ ಗಾಳಿ ಹೀಗೆ ಬರುತ್ತಿರುತ್ತದೆ...

      Delete
  2. Hey kavitha Sakkath aagide.. baritha iri inta kavanagalu..

    Anand MB
    Bengaluru

    ReplyDelete
  3. http://manadamaatu1.blogspot.in/ Hi Kavita nice poems :) liked it...:) Plz visit my site too...

    ReplyDelete

Note: Only a member of this blog may post a comment.