Saturday, February 11, 2012

ಅನಿಸುತಿದೆ ನನಗಿಂದು ಅಳಬೇಕು ಎಂದು ...

ಏನಾದರು ಸಾಧಿಸಬೇಕು ಎಂದು ಆತೊರೆಯು ಮನಕೆ ಸೋಲೆ ಎದುರಾದಾಗ ಮನದಲ್ಲಿ ಮೂಡುವ ಮಾತುಗಳು ಇಲ್ಲಿವೆ ಓದಿ ನೋಡಿ




ಅನಿಸುತಿದೆ ನನಗಿಂದು ಅಳಬೇಕು ಎಂದು
ಕಾಡುತಿದೆ ನೆನಪುಗಳು ಬೆಂಬಿಡದೆ ಇಂದು

ಮೂಕವಾದೆನು  ಒಂದು ಕ್ಷಣ
ಕಹಿ ನೆನಪುಗಳ ನರ್ತನವ ಕಂಡು
ಮೌನಿಯಾದೆನು ಇನ್ನೊಂದು ಕ್ಷಣ
ತಲೆ ಬರಹವ ಕಂಡು

ಯೋಗಿ ಪಡೆದದ್ದು ಯೋಗಿಗೆ
ಜೋಗಿ ಪಡೆದದ್ದು ಜೋಗಿಗೆ
ಎಂತೆಂಬ  ಗಾದೆ ನಿಜವಾಗಿದೆ ಈಗ
ಇದರಿಂದ ತಿಳಿಯಬೇಕಿದೆ ಮತ್ತಷ್ಟು ಈಗ

ಬಟಾ ಬಯಲು ಬದುಕಿನಲಿ
ಇರುವುದೊಂದೆ ಹೆಜ್ಜೆಗುರುತು
ಮೂಡಿರುವ ಗುರುತಿನಲಿ
ಸರಿ ಎಷ್ಟು ತಪ್ಪೆಷ್ಟು ತಿಳಿದಿಲ್ಲ ಎನಗಂತು

ಏನೋ ಮಾಡಬೇಕೆಂದಿರುವ ಮನಕೆ
ಸೋಲೆ ಇಹುದಿಲ್ಲಿ ಸಾಲು ಸಾಲಾಗಿ
ಮುಂದಿದೆ ಎನ್ನ ದಿನವೆನ್ನುವ ಆಶಾಭಾವಕೆ
ನಿರಾಸೆಯೇ ಕಾದಿದೆ ಸಾಲು ಸಾಲಾಗಿ

ಕುಂದಿರುವ ಮನಕೀಗ ಅನಿಸುತಿದೆ ಅಳಬೇಕು ಎಂದು
ಬಿಕ್ಕಳಿಸಿ ಬಿಕ್ಕಳಿಸಿ ಅಳಬೇಕು ಎಂದು
ಯಾರು ಕಾಣದ ಹಾಗೆ ಯಾರು ಕೇಳದ ಹಾಗೆ
ಕಣ್ಣೀರ ಹೆಜ್ಜೆಗುರುತು ಬೀಳದ ಹಾಗೆ

ಅನಿಸುತಿದೆ ನನಗಿಂದು ಅಳಬೇಕು ಎಂದು
ಕಾಡುತಿದೆ ನೆನಪುಗಳು ಬೆಂಬಿಡದೆ ಇಂದು  
           
                                        ಇಂತಿ
                                                  
ಕವಿತಾ ಗೌಡ
                          





1 comment:

  1. ಏನೋ ಗೊತ್ತಿಲ್ಲ.. ನಿಮ್ಮ ಕವಿತೆ ನಿಮ್ಮ ಬಗ್ಗೆನೆ ಹೇಳ್ತಾ ಇದೆ ಅನಿಶ್ತಿದೆ. Anyway ಮಮತಾ ಅವರು ಹೇಳಿದ್ದು ಸ್ವಲ್ಪ ಮಟ್ಟಿಗೆ ನಿಜಾನೆ ಇದೆ.

    ReplyDelete

Note: Only a member of this blog may post a comment.