Monday, February 13, 2012

ಒಂಟಿ ತನವು ಕಾಡಿದಾಗ ...

ಸ್ನೇಹಿತರೆ ಒಂಟಿ ತನ ಅನ್ನೋದು ಎಲ್ಲಾರಿಗೂ ಪರಿಚಿತ ಅಲ್ವಾ...?  
ಅದರಲ್ಲೂ ಹುಡುಗಿಯರಿಗೆ ಚಿರ ಪರಿಚಿತ

ಹುಡುಗರು ಬೆಳಿಗ್ಗೆ ಆಯಿತು ಅಂದ್ರೆ ಎಲ್ಲಾ ಅಡ್ಡದಲ್ಲಿ ಸೇರಿ, ಅತ್ತ ಇತ್ತ ಓಡಾಡೋ ಹುಡುಗಿರನ್ನ ನೋಡಿಕೊಂಡು, ಧಮ್ ಗಿಮ್ ಹೊಡ್ಕೊಂಡು  ಪಿಚ್ಚರ್ ಗಿಚ್ಚರ್ ಗೆ ಹೋಕೊಂಡು ಕಾಲ ಕಳಿತರೆ


ಆದ್ರೆ ಹುಡುಗಿಯರಿಗೆ ಅಂಗಲ್ಲ ಫ್ರೆಂಡ್ಸ್ ಜೊತೆ ಹೋಡಾಡುದ್ರು ಸ್ವಲ್ಪ ಹೊತ್ತು ಮಾತ್ರ ಅದು ಕೂಡ ಕುಟುಂಬಕ್ಕೆ ತಕ್ಕಾಗೆ ಲಕ್ಷ್ಮಣ ರೇಖೆಗಳಿರುತ್ತವೆ.

ಹಾಗಂತ ಹುಡುಗರಿಗೆ ಒಂಟಿತನ ಕಾಡಲ್ಲ ಅಂತ ನಾನೇನು ಹೇಳುತ್ತಿಲ್ಲ, ಅವರಿಗೂ ಕಾಡುತ್ತೆ ಆದ್ರೆ ಬಹಳ ಕಡಿಮೆ. ಆದ್ರೆ ಹುಡುಗಿಯರಿಗೆ ಜಾಸ್ತಿ ಕಾಡುತ್ತೆ ಯಾಕೆ ಅಂದ್ರೆ ಅವರು ಹುಡುಗಿಯರು, ಹೆಚ್ಚಿನ ಹುಡುಗಿಯರಿಗೆ, ಅವರ ಮನಸು ಅವರಿಗೆನೆ ಅರ್ಥ ಆಗಿರಲ್ಲ ಅದುಕ್ಕೆ ಇರಬಹುದೇನೋ ಅನುಸ್ತಿದೆ.
 
... ಇದೇನಪ್ಪ ಇವಳು ಹುಡುಗ ಹುಡುಗಿಯರ ಒಂಟಿತನದ ಬಗ್ಗೆ ಚರ್ಚೆ ಮಾಡ್ತಿದಾಳೆ ಅಂದುಕೊಂಡ್ರ....?
ಖಂಡಿತಾ ಇಲ್ಲ ರೀ... ಅಂದ ಹಾಗೆ ನಾ ಹೇಳೋದಿಕ್ಕೆ ಹೊರಟಿರೋದು ಒಂಟಿತನಕ್ಕೆ ಸಿಕ್ಕ ಒಂದು ಹುಡುಗಿಯ ಮನಸ್ತಿತಿ.  

ಹುಡುಗಿ ಅಂದ್ರೆ ಎಂಥ ಹುಡುಗಿ ಅಂದುಕೊಂಡ್ರಿ ಬೇಜಾರು ಅಂದ್ರೆ ಏನು ಅಂತನು ಗೊತ್ತಿಲ್ಲದ ಹುಡುಗಿ ಒಂಟಿತನ ಅವಳ ಹತ್ತಿರನು ಸುಳಿಯೋದಿಕ್ಕೆ ಹಾಗದೆ ಇರೋತರ ಇದ್ದಿದ್ದ ಹುಡುಗಿ. ಪಟ ಪಟ ಹರಳು ಹುರಿದಂಗೆ ಮಾತಾಡೋ ಮಾತಿನ ಮಲ್ಲಿ, ಅವಳ ಜೊತೆ ಒಂದು ಸಾರಿ ಮಾತಾಡುದ್ರೆ ಮತ್ತೆ ಮತ್ತೆ ಮಾತಾಡಬೇಕು ಅಂತ ಅನ್ನಿಸೋ, ನಮ್ಮ ಮನೆ ಹುಡುಗಿ ಹತ್ರ ಮಾತಾಡ್ತಿದಿನೇನೋ ಅನಿಸುವಂತೆ ಫೀಲ್ ಹಾಗೋ ತರ, ಸದಾ ಪಿಂಗ್ ಪಾಂಗ್ ಬಾಲ್ ತರ ಪುಟಿಯುವ ಹುಡುಗಿ.


  
ಇಂತ ಹುಡುಗಿ ಲೈಫ್ ಅಲ್ಲಿ ಒಂದು ಸಾರಿ ಒಂಟಿತನ ಎಂಟ್ರಿ ಕೊಡುತ್ತೆ.ಅದೇ ಸಮಯದಲ್ಲಿ ಮನೆಯಿಂದ ಬೇರೆ ದೂರ ಇದ್ದಳುಮನೆ ಅವರಿಗೆ ಫೋನ್ ಮಾಡುದ್ರೆ ತಿಂಡಿ ಊಟದ ವಿಷಯ ಬಿಟ್ರೆ ಅಪ್ಪಪ್ಪಾ ಅಂದ್ರೆ ೧೦ ನಿಮಿಷ ಮಾತಾಡೋದೇ ಜಾಸ್ತಿ. ಸ್ನೇಹಿತರೆಲ್ಲ ಅವರ ಅವರ ಕೆಲಸದಲ್ಲಿ ಮಗ್ನ. ಇಂತ ಸಮಯದಲ್ಲಿ ಯಾರು ಜೊತೆನು ಮಾತಾಡಕೆ ಆಗದೆ ತನ್ನ ಎಲ್ಲಾ ಮಾತನ್ನ ಮನಸೊಳಗೆ ಅದುಮಿಟ್ಟು, ಭಾವನೆಗಳನ್ನ ಬಚ್ಚಿಟ್ಟು ನಿಧಾನವಾಗಿ ಮಂಕಾಗುತ್ತ ಹೋಗುತ್ತಾಳೆ


ಆವಾಗಿನಿಂದ, ಚೀರಾಡಿಕೊಂಡು ಹಾಡು ಹಾಡಿಕೊಂಡು ಕುಣಿದಾಡಿಕೊಂಡು ಶುರು ಆಗುತಿದ್ದ ದಿನಗಳು ಬೇಜಾರಿಂದ ಶುರುವಾಗುತ್ತವೆ. ಪ್ರಶಾಂತವಾಗಿದ್ದ ಮನಸೊಳಗೆ ಏನೋ ಏರು ಪೇರುಗಳು. ಏನೇನೋ ಹುಚ್ಚು ಹುಚ್ಚು ಯೋಚನೆಗಳು, ಅವಳಿಗೆ ಏನು ಆಗುತಿದೆ, ಏನು ಅನುಸ್ತಿದೆ ಅಂತ ಅವಳಿಗೆ ಸರಿಯಾಗಿ ಗೊತ್ತಾಗಲ್ಲಒಂದು ಸಾರಿ ನಗುತ್ತಾಳೆಇನ್ನೊಂದು ಸಾರಿ ಅಳುತ್ತಾಳೆನಾ ಇಷ್ಟು ದಿನ ಹೀಗೆ ಇರಲಿಲ್ಲ ಇವಾಗ ಏನಾಗಿದೆ ನನಗೆ ಅಂತ ಕಾರಣ ಹುಡುಕುತ್ತ ಹೋಗ್ತಾಳೆಎಸ್ಟೆ ಯೋಚನೆ ಮಾಡುದ್ರು ಕಾರಣ ಏನು ಅಂತ ಗೊತ್ತಾಗಲ್ಲಮತ್ತೆ ಕನ್ನಡಿಯಲ್ಲಿ ಮುಖ ನೋಡ್ಕೊಂಡು ಇದು ನಾನೇನಾ ಅಂಥ ಬೆಚ್ಚಿ ಬೆರಗಾಗಿ ಕಣ್ಣಂಚಲ್ಲಿ ನೀರು ತುಂಬಿಸಿಕೊಂಡು ನಿಂತುಕೊಳ್ಳುತ್ತಾಳೆ ಕಣ್ಣೀರು ಕೆನ್ನೆ ಜೊತೆಗೆ ಮಾತಾಡೋಕೆ ಮುಂಚೆ, ಅಯ್ಯೋ ಬೇರೆ ಅವರು ನೋಡುದ್ರೆ ಅನ್ನೋ ಭಾವನೆಯಿಂದ ಕಣ್ಣೀರ ಹೊರಸಿಕೊಂಡು ಮತ್ತೆ ಪೌಡರ್ ಹಚ್ಚಿ ತುಟಿಯಂಚಲ್ಲಿ  ಕೃತಕ ನಗೆ ಬೀರಿ ತನ್ನ ಕೆಲಸಕ್ಕೆ ತಾನು ಹೊರಡುತ್ತಾಳೆ.

 
 ತುಂಬಾ  ಭಾವುಕಳಾದಾಗ ಇಲ್ಲ ಸಲ್ಲದ ಯೋಚನೆಗಳು ತಲೆ ಹೊಕ್ಕುತ್ತವೆ. ಹೀಗೆ ಯೋಚನೆ ಶುರು ಆದಾಗ ಸೂಕ್ಷ್ಮ ಮನಸು ದುರ್ಬಲವಾಗುತ್ತ ಹೋಗುತ್ತೆ, ಯಾರಾದ್ರು ಏನಾದ್ರೂ ಅಂದ್ರೆ ಕೇಳಿಸಿಕೊಳ್ಳದೆ ಇದ್ದ ಮನಸು, ಇವಾಗ feel  ಮಾಡೋಕೆ ಶುರು ಮಾಡುತ್ತೆ, ಸ್ವಲ್ಪ ಕಷ್ಟ ಅಂತ ಅನಿಸಿದರು ಎಲ್ಲಾ ನನಿಗೆ ಯಾಕೆ ಹೀಗೆ ಆಗುತ್ತಿದೆ ಅಂತ ಅನಿಸೋಕೆ ಶುರು ಮಾಡುತ್ತೆಆಕಾಶನೇ ತಲೆ ಮೇಲೆ ಬಿದ್ದಂಗೆ ಆಗುತ್ತೆ, ಬದುಕು ತುಂಬಾ ಕಷ್ಟ ಅನಿಸುತ್ತೆ ಏನೋ ಬೇಕು ಅನಿಸುತ್ತೆ ಇನ್ನೊಂದು ಕ್ಷಣ ಏನೋ ಬೇಡ ಅನಿಸುತ್ತೆ

ಇಸ್ಟೆಲ್ಲಾ ಯೋಚನೆಗಳು ಆದಮೇಲೆ ಅವಳೊಳಗೆ ತರ್ಕ ಶುರು ಆಗುತ್ತೆ

ಪ್ರಶ್ನೆ : ನಾನು ಯಾಕೆ  ಇಲ್ಲಿ ಇರಬೇಕು...?
ಉತ್ತರ : ಕೆಲಸ ಮಾಡೋದಿಕ್ಕೆ ...
 
ಪ್ರಶ್ನೆ : ನಾನು ಯಾಕೆ ಕೆಲಸ ಮಾಡ್ಬೇಕು...?
ಉತ್ತರ : ಬದುಕು ಸಾಗಿಸೋದಿಕ್ಕೆ, ಸಮಾಜದಲ್ಲಿ ಗೌರವಕ್ಕೆ ...

ಪ್ರಶ್ನೆ : ಅಂಗಾದ್ರೆ ನಾ ಕೆಲಸ ಮಾಡಲೇ ಬೇಕಾ ...?
ಉತ್ತರ : ಹೌದು, ಬದುಕಿಗೆ ಇಸ್ಟೆಲ್ಲಾ ಬೇಕು ಅದುಕ್ಕೆ ನಾ ಇಲ್ಲೇ ಇರಬೇಕು ...

ಪ್ರಶ್ನೆ : ಬದುಕೇ ನನಿಗೆ ಬೇಡ ಅಂದ್ರೆ,ಈ ನೋವೆ ಇರೋದಿಲ್ಲ ಅಲಾ...?
ಉತ್ತರ : ಬದುಕೇಬೇಡ  ಅಂದ್ರೆ ಸಾಯಬೇಕು ...

" ಸಾಯೋದು  ಇಷ್ಟನೇ,  ಆದ್ರೆ  ಹುಟ್ಟೋದು ಹುಟ್ಟಿ ಬಿಟ್ಟಿದಿನಿ ಸಾಯೋಕೆ ಮುಂಚೆ ಏನಾದ್ರೂ ಸಾಧಿಸಬೇಕು ಅನ್ಕೊಂಡಿದಿನಿ ಅದ್ಕೆ ನೋವು ಅನುಭವುಸ್ತಿನಿ ಸಾಯಲ್ಲ "
ಥರ ತರ್ಕ ಕೊನೆಯಾಗುತ್ತೆ .

ಆಮೇಲೆ  ಮೇಲಿಂದ ಮೇಲೆ ಹಳೆಯ ನೆನಪುಗಳು ಧಾಳಿಮಾಡ್ತಾನೆ ಇರ್ತವೆ, ಏನೋ ಕಳ್ಕೊಂಡಿದಿನಿ ಅನ್ನೋ ಭಾವನೆ ಹೋಡುತ್ತಲೇ ಇರುತ್ತೆ.

ಗೋಪಾಲಕೃಷ್ಣ ಅಡಿಗ ಅವರು ಹೇಳಿದರಲ್ವಾ

ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ ...

ಅನ್ನೋತರ ತನ್ನ ಸುತ್ತ ಇರೋದನ್ನ ಬಿಟ್ಟು ಇಲ್ಲದೆ ಇರೋದನ್ನ ನೆನುಸ್ಕೊಂಡು ಮನಸ್ಸು ಕೊರಗುತ್ತ ಹೋಗುತ್ತೆ . ಒಂಟಿತನ ಹೋಗುವ ವರೆಗೂ ಥರ ಅಲೆಗಳು ಹೇಳುತಾನೆ ಇರುತ್ತವೆ ಥರ ತರ್ಕ ಗಳು ನಡಿತನೇ ಇರುತ್ತವೆ...


                                                                             ಇಂತಿ
                                                                                         ಕವಿತಾ ಗೌಡ 

2 comments: