Tuesday, February 21, 2012

ಮರೆಯಲಾಗದ ಮಾಸದ ನಗು ...

ಕಳೆದುಕೊಂಡ ಕುರಿಯ ಹುಡುಕುವ ಹುಡುಗ ತನ್ನ ಮನವ ಕಳೆದುಕೊಳ್ಳುವ ಪರಿಯನ್ನು ಓದಿ ನೋಡಿ



ನಾನೊಬ್ಬ ಹಳ್ಳಿ ಹೈದ
ಸಾದಾ ಸೀದಾ ಹುಡುಗ
ನಮ್ಮನೆಯ ಕುರಿ ಹುಡುಕಿ
ಹೊರಟ್ಟಿದ್ದೆ ದಾರಿಯಲಿ
ನಾ ಕಂಡೆನೊಂದುಡುಗಿ

ಉದ್ದ ಕೂದಲಿನುಡುಗಿ
ದುಂಡು ಮುಖದ ಬೆಡಗಿ
ಹಸಿರು ಲಂಗವ ತೊಟ್ಟು
ಕೆಂಪು ರವಿಕೆಯ  ಉಟ್ಟು
ತಲೆಯ ಮೇಲೆ ಬುತ್ತಿಯ ಹೊತ್ತು
ನಡೆಯುತಿದ್ದಳು ಗದ್ದೆ ಬದಿಯ ನಡುವೆ

ನಾ ಕೂಗಿ ಅವಳ ಕೇಳಿದೆನು
ನಮ್ಮನೆಯ ಕುರಿಯ ದಾರಿ 
ಅವಳೆಂದಳದಕೆ ನನಗೇನು ಗೊತ್ತಿಲ್ಲ
ಅಲ್ಲಿಹನು ನನ್ನಪ್ಪ
ಬನ್ನಿ ಕೇಳಿರಿ ಅವರನೊಮ್ಮೆ

ಪೈಲ್ವಾನ ನಂತ ಹೈದನೊಬ್ಬ
ದಪ್ಪ ಮೀಸೆಯ ಹೊತ್ತಿದ್ದ
ಕೈಲಿ ಮಡಿಕೆಯ ಹಿಡಿದು
ಹೊಲವನ್ನು ಹುಳುತಿದ್ದ
ಅವನು ಅವಳಪ್ಪ ಎಂದರಿದು
ಬೆದರಿದೆನು ಒಂದು ಕ್ಷಣ

ಎದೆ ಡವ ಡವ ಎನುತಿತ್ತು
ಕೈ ಕಾಲುಗಳು ನಡುಗುತಿತ್ತು
ಮನಸು ಹಿಂದೇಟು ಹಾಕುತಿತ್ತು
ಆದರೂ ಕೊಂಚ ದೈರ್ಯದಿ
 
ಕೇಳಿದೆನು ನಮ್ಮನೆಯ ಕುರಿಯ ದಾರಿ

ಕರೆದರು ನನ್ನನ್ನು ಉಟಕ್ಕೆ
ಅವರ ಜೊತೆ
ಒಲ್ಲೆನೆಂದರು ಬಿಡದೆ
ರಾಗಿ ಮುದ್ದೆ ಜೊತೆ ಕಾಳು ಸೊಪ್ಪಿನ ಸಾರು
ಬೇಡ ಎಂದರು ಕೊಟ್ಟರೆನಗೆ

ಊಟದ ಜೊತೆ ಸಾಗುತ್ತಿತ್ತು ಮಾತು
ಮಾತಲ್ಲಿ ಗತ್ತು ಇತ್ತು
ಹೃದಯದಿ ಕಾರುಣ್ಯವಿತ್ತು
ಆಗಲೇ ತಿಳಿಯಿತು ಅವರು
  ಊರಿನ ಗೌಡರೆಂದು

ಹೆಚ್ಚಾಯಿತು ಎದೆ ಬಡಿತ ಕೈ ಕಾಲು ನಡುಕ
ಆದರು ಕುಳಿತಿದ್ದೆ ಗೌಡರ ಮಗಳ ಸಲುವಾಗಿ
ಅವಳೊಂದು ಸದಾ ಮಿನುಗುವಾ ಹುಡುಗಿ
ಕಣ್ಣಲ್ಲಿ ಕೋಲ್ಮಿಂಚಿನ ಹೊಳಪಿತ್ತು
ಮುಖದಲ್ಲಿ ಮಾಸದ ನಗುವಿತ್ತು
ಬಾಯಿ ತುಂಬಾ ಹರಳು ಉರಿದಂತ ಮಾತಿತ್ತು

ಆಗಲೇ ಎನ್ನ ಮನ ಅವಳೆಡೆಗೆ ಬಾಗಿತ್ತು
ನಾ ಮರೆತೇ ನಮ್ಮನೆಯ ಕುರಿಯ ವಿಚಾರ
ಸೀದಾ ಹಿಡಿದೆನು ನಮ್ಮನೆಯ ದಾರಿ
ನಾ ಅಲ್ಲಿಂದ ಬಂದರು ಬರಲಿಲ್ಲ ಎನ್ನ ಮನ
ಮರೆಯಲಾಗದು ಮಾಸದ ನಗುವ
                                     ಇಂತಿ
                                                        ಕವಿತಾ ಗೌಡ

1 comment:

Note: Only a member of this blog may post a comment.