Saturday, February 11, 2012

ಕಳೆದು ಹೋಗಿರುವೆ ನಾನು ಇಂದು ...

ತನ್ನದಲ್ಲದ ನಾಡಿನಲ್ಲಿ ತನ್ನ ತನವ ಕಳೆದುಕೊಂಡು ತನಗಾಗಿ ಹುಡುಕುವ ಹುಡುಗಿಯ ಮನದ ಭಾವಗೀತೆಯನ್ನು ಓದಿ ನೋಡಿ




ಕಳೆದು ಹೋಗಿರುವೆ ನಾ
ಕತ್ತಲೆಯ ನಾಡಿನಲ್ಲಿ
ಬೆಂದು ಹೋಗಿರುವೆ ನಾ
ಸುಡು ಸುಡುವ ಸುಡುಗಾಡಿನಲ್ಲಿ

ಎತ್ತ ನೋಡಿದರತ್ತ ಉರಿ ಬಿಸಿಲಿನಂತ ಜನ
ಕಣ್ಣ ಬಿಡಲಾರದೆ ತಡವರಿಸಿರುವೆ ನಾ
ಮನವೆಂಬ ಭುವಿ ಕಾದು ಕೆಂಪಾಗಿ ಸುಡುತಿರಲು
ಕಾಲ ನೆಲಕಿಟ್ಟು ನೆಡಯಲಾಗದಿರುವೆ ನಾ 

ಕೈ ಚಾಚಿ ನಿಂತಾಗ ಕೈಹಿಡಿಯುವವರಾರಿಲ್ಲ
ಆದೆ ನಾನಿಲ್ಲಿ ಒಂಥರಾ ತಬ್ಬಲಿ
ಕಣ್ಣೇರು ಹರಿಸಿ ಮಂಕಾಗಿ ಕೂತಾಗ
ಸಾಂತ್ವನ ಹೇಳಲು ಯಾರಿಲ್ಲ ನನಗಿಲ್ಲಿ

ನನ್ನಲ್ಲಿದ್ದ ನನ್ನ ತನವಿಲ್ಲ ಇಂದು
ಮಾಸದಂತಿದ್ದ ನಗು ಮಾಯವಾಗಿದೆಯಿಂದು
ತಲೆಯಲ್ಲಿ ಬಾಲಿಶದ ತರ್ಕವಿದೆಯಿಂದು
ಎದೆಯಲ್ಲಿ ಹೇಳಲಾಗದ ದುಗುಡವಿದೆಯಿಂದು

ಒಟ್ಟಾರೆ ಹೇಳುವೆನು
ಕಳೆದು ಹೋಗಿರುವೆ ನಾನು ಇಂದು
ಹುಡುಕಬೇಕಾಗಿದೆ ನನ್ನನಿಂದು


                                              ಇಂತಿ
                                                        ಕವಿತಾ ಗೌಡ

No comments:

Post a Comment

Note: Only a member of this blog may post a comment.