Friday, February 3, 2012

ಮನದ ತುಡಿತ ...

ಮನಸಿನ ಭಾವನೆಗಳನರಿಯಲಾಗದೆ ಚಡಪಡಿಸುವ ಹುಡುಗಿಯ ಸ್ತಿತಿಯನ್ನು ಓದಿ ನೋಡಿ




ಏನೆಂದು ಹೇಳಲಿ ಮನದ ತುಮುಲವ
ಏನೆಂದು ಬರೆಯಲಿ ಮನದ ತುಡಿತವ

ಎಲ್ಲಾ ಇದ್ದರು ಏನೂ ಇಲ್ಲದ ಭಾವ ಒಮ್ಮೊಮ್ಮೆ
ಏನಿರದಿದ್ದರೂ ಎಲ್ಲಾ ಇರುವ ಭಾವ ಇನ್ನೊಮ್ಮೆ

ಏನೋ ಬೇಕೆನ್ನುತದೆ ಮನವೊಮ್ಮೆ
ಬೇರೇನುಬೇಡ ಎನ್ನುತದೆ ಮತ್ತೊಮ್ಮೆ

ಪ್ರತಿದಿನವು ಜಂಜಾಟ ಬದುಕೊಳಗೆ
ಪ್ರತಿಕ್ಷಣವು ತೊಳಲಾಟ ಮನದೊಳಗೆ

ಹುಚ್ಚು ಮನವನರಿಯಲು ಹೋಗಿ
ಹುಚ್ಚಿಯಾದೆ ನಾನೀಗ
 
ಒಂದಂತೂ ಸತ್ಯ 
ಹೇಳಲಾಗದೀ ಮನದ ತುಮುಲವ
ಬರೆಯಲಾಗದೀ ಮನದ ತುಡಿತವ
 
                                                            ಇಂತಿ
                                                                      ಕವಿತಾ ಗೌಡ




9 comments:

  1. huchchu manasina alavu mukagalannu heluva prayanta tumbe chenagi bandide.. .

    nice one..

    ReplyDelete
  2. ಮನಸೆಂಬ ಮರ್ಕಟ ಯಾವತ್ತು ಹೀಗೆ. ಅದೇನು ಮಾಡತ್ತೆ ಅಂತ ಅದಕ್ಕೆ ಗೊತ್ತಿರಲ್ಲ.. ಅಂದಹಾಗೆ "ಎಲ್ಲೆಲ್ಲೋ ಓಡುವ ಮನಸ್ಸೇ" ಅಂತ ಸಿದ್ಲಿಂಗು ಚಲನ ಚಿತ್ರದಲ್ಲಿ ಇದೆ. ತುಂಬಾ ಚೆನ್ನಾಗಿ ಮನಸ್ಸಿನ ಬಗ್ಗೆ ಹೇಳಿದ್ದಾರೆ. ಒಂದು ಸಲ ಕೇಳಿ.
    ನನಗೆ ಅದು ಬಹಳ ಇಷ್ಟ. ಭಾವನ ಮನಸ್ಸು ಇದ್ದವರಿಗೆ ಖಂಡಿತ ಇಷ್ಟ ಆಗುತ್ತೆ.

    ReplyDelete
    Replies
    1. ಧನ್ಯವಾದಗಳು ನಾಗರಾಜು ರವರೆ
      ಮೊನ್ನೆ ಸಿದ್ಲಿಂಗು ಚಿತ್ರದ ಹಾಡನ್ನು ಕೇಳಿದೆ ತುಂಬಾ ಚನ್ನಾಗಿದೆ

      Delete
  3. ಹೇಳಲಾಗದ ಮನಸಿನ ತುಮುಲ, ತುಡಿತಗಳಿಗೆ ಆಗದಿರಲಿ ನಿಂದನೆ
    ಭಾವನೆಗಳಿಗೆ ರೂಪವ ಕೊಡಲು ಅಣಿಯಾದ ನಿಮಗೆ ಇದೋ ನನ್ನ ವಂದನೆ.

    ReplyDelete
    Replies
    1. ಧನ್ಯವಾದಗಳು ಚಂದ್ರಶೇಖರ್ ರವರೆ

      Delete
  4. pratiyobbara manada matu nim e bhava geeteyalli mudide....

    ReplyDelete

Note: Only a member of this blog may post a comment.