Tuesday, May 13, 2014

ಬದುಕು ಗಡಿಯಾರ


ಬದುಕೆಂಬ ಗಡಿಯಾರ 
ಎಷ್ಟೊಂದು ಚಿಕ್ಕದು 

ಟಿಕ್ ಟಿಕ್ ಎಂದುರುಳುತಿವೆ ದಿನಗಳು 
ಸರಸರನೆ ಸರಿಯುತಿವೆ ಸಂವತ್ಸರಗಳು 

ಏಳು ಬೀಳಿನ ಆಟವಿದೆ ಪ್ರತಿ ಘಳಿಗೆ 
ಎಲ್ಲವ ನಿಯಂತ್ರಿಸುತಿದೆ ಗುಂಡಿಗೆ ಬ್ಯಾಟರಿ

ಒಮ್ಮೆ ನಿಂತರೆ ಈ ಗುಂಡಿಗೆ ಬ್ಯಾಟರಿ 
ಬದುಕಿಗೊಂದು ವಿದಾಯ ಖಾತರಿ
                 
                                                        -ಕವಿತಾ ಗೋಪಿಕುಂಟೆ 


2 comments:

  1. ಅದನರಿಯದ ಮೂಢ ಮನುಜ,
    ಹಾರಾಡಿದ್ದೇ ಹಾರಾಡಿದ್ದು ಅಲ್ಲವೇ?

    ReplyDelete
  2. ಹೌದು ಸರ್
    ಜೀವನದ ಮಹತ್ವ ಗೊತ್ತಿಲ್ಲದೆ ಬೇಡದೆ ಇರೋದಕ್ಕೆ ಆಸೆ ಪಟ್ಟು ಹೊಡೆದಾಡುತ್ತೇವೆ

    ReplyDelete

Note: Only a member of this blog may post a comment.