Thursday, February 28, 2013

ಕಡಲತೀರದ ನೀನಿಲ್ಲದ ಪಯಣ

ಮುಸ್ಸಂಜೆ ವೇಳೆಯಲಿ
ಕಡಲ ತೀರದಲಿ
ಬೀಸುವ ತಿಳಿ ಗಾಳಿಯಲಿ
ನೀ ಬಂದು ನನ್ನ ಜೊತೆಯಾದಂತೆ
ಭಾಸವಾಗುತಿದೆ ನನಗಿಂದು

ನುಣುಪಾದ ಮರಳಿನಲಿ
ತಿಳಿ ನೀರ ಸ್ಪರ್ಶದಲಿ
ನೀನಿಟ್ಟ ಹೆಜ್ಜೆಗಳೆ
ನೆನಪಾಗುತಿವೆ ಇಂದು
ಪ್ರತಿ ಹೆಜ್ಜೆಯಲು ಕಾಡುತಿವೆ ಇಂದು

ಕಡಲಲೆಗಳ ಭೋರ್ಗರೆತಕೆ
ನಿನ ಮಾತೆ ನೆನಪಾಗಿದೆ ಇಂದು
ನೀ ಕಟ್ಟಿದ ಮರಳುಗೂಡು
ಕಣ್ಣಿಗೆ ಕಟ್ಟಿದಂತಿದೆ ಇಂದು
ಕಣ್ಣೀರಲ್ಲೆ  ಕರಗುತಿದೆ ಇಂದು

ಕಳೆದುಹೋದ ಕ್ಷಣಗಳು
ಆಡಿದಂತ ಮಾತುಗಳು
ಮಾಡಿದಂತ ಆಣೆ ಭಾಷೆಗಳು
ಬರಿ ನೆನಪಾಗಿವೆ ಇಂದು
ಪ್ರತಿಕ್ಷಣವು ಕೊಲ್ಲುತಿವೆ ಇಂದು 
ಇಂತಿ,
           ಕವಿತಾ ಗೌಡ

3 comments:

  1. ಕವಿತಾ ಅವ್ರೆ ನಿಮ್ಮ ಕವನ ತುಂಬಾ ಚನ್ನಾಗಿ ಇದೆ.
    ಕಳೆದು ಹೋದ ನೆನಪುಗಳೇ ಮನಸ್ಸಿನಲ್ಲಿ ಕಾಡುವುದು...
    ಕಾಡುವ ನೆನಪುಗಳೇ ಮನಸ್ಸಿನಲ್ಲಿ ಮನೆ ಮಾಡುವುದು....

    ReplyDelete
    Replies
    1. ಧನ್ಯವಾದಗಳು ರವಿ ಮತ್ತು ಮಲ್ಲೇಶ್.

      Delete

Note: Only a member of this blog may post a comment.