Wednesday, September 5, 2012

ಹೊಂಗಿರಣಕಾಗಿಯೇ ಬರಲಿ ಕಾರ್ಮೋಡ ಎನ್ನಿ ಬಾಳಲಿ



ಕತ್ತಲೆಯ ಕಾರ್ಮೋಡದಿಂದಿದೆ
ಹೊಂಗಿರಣದ ಬೆಳಕು
ಆ ಹೊಂಗಿರಣಕಾಗಿಯೇ  ಬರಲಿ
ಕಾರ್ಮೋಡ ಎನ್ನಿ ಬಾಳಲಿ
 
ಪ್ರತಿ ದುಃಖದ ಹಿಂದಿದೆ
ನಲಿವಿನ ಕ್ಷಣಗಳು
ಆ ನಲಿವಿನ ಕ್ಷಣಕಾಗಿಯೇ ಬರಲಿ
ದುಃಖ ಎನ್ನಿ  ಬಾಳಲಿ
 
ಪ್ರತಿ ಸೋಲಿನ ಹಿಂದಿದೆ
ಗೆಲುವಿನ ಸರದಿಯು
ಆ ಗೆಲುವಿಗಾಗಿಯೇ ಬರಲಿ
ಸೋಲು ಎನ್ನಿ ಬಾಳಲಿ
 
ಪ್ರತಿ ನೋವಿನ ಹಿಂದಿದೆ
ಪರರ ನೋವನರಿಯುವ ಭಾವವು
ಆ ಅರಿವಿಗಾಗಿಯೇ ಬರಲಿ
ನೋವು ಎನ್ನಿ ಬಾಳಲಿ
 
                                                        ಇಂತಿ
                                                        ಕವಿತಾಗೌಡ


No comments:

Post a Comment